ನನ್ನ ಬಗ್ಗೆ
ಹೆಸರು: ಅಡಿವೆಪ್ಪ (ಅಲಿಯಾಸ : ಅಡಿವೇಶ್)
ತಾಯಿಯ ಹೆಸರು:ಕಾಶಿಬಾಯಿ
ತಂದೆಯ ಹೆಸರು: ಸಂಗಪ್ಪ
ಮನೆತನದ(ಕುಟುಂಬ) ಹೆಸರು: ಯಲಗೋಡ
ವಯಸ್ಸು: 41 ಮುಗಿದಿದೆ
ಶಿಕ್ಷಣ: ಡಿಪ್ಲೋಮಾ ಪದವಿಧರ
ವೃತ್ತಿ: ಕಂಪ್ಯೂಟರ್ ತರಬೇತುದಾರ
ಇತರೆ:
ಮದುವೆಯಾಗಿದೆ, ಇಬ್ಬರು ಮಕ್ಕಳಿದ್ದಾರೆ. ಗಣಕಲೋಕ ಕಂಪ್ಯೂಟರ್ ತರಬೇತಿ ಕೇಂದ್ರ, ನನ್ನ ಸಂಸಾರದ ಜಟಕಾಬಂಡಿ. ಸಂತೋಷ-ಸಂಘರ್ಷ ಸಮ್ಮಿಶ್ರಣದ ಸರಳ ಸಂಸಾರ ನನ್ನದು.
ಕಲಿಯುವುದು,ಓದುವುದು, ಬರೆಯುವುದು ಅಭ್ಯಾಸ. ಅದನ್ನ ಯುಟ್ಯೂಬ್ ವಿಡಿಯೋಗಳಾಗಿ, ಬ್ಲಾಗ್ ಬರಹಗಳಾಗಿ ರೂಪಾಂತರಿಸುವುದು, ನನ್ನ ಉಪ ಕಸುಬು.
ಸೈಕಲ್ ತುಳಿಯುವುದು, ಹಾಡು ಕೇಳುವುದು ಹವ್ಯಾಸ.
ತಂದೆ-ತಾಯಿಗಳಿಗೆ ಒಳ್ಳೆಯ ಮಗನಾಗಿದ್ದೀನಿ, ಹೆಂಡತಿಗೆ ಒಳ್ಳೆಯ ಗಂಡನಾಗಿದ್ದೀನಿ, ಮಕ್ಕಳಿಗೆ ಅಕ್ಕರೆಯ ತಂದೆಯಾಗಿದ್ದೀನಿ, ನನ್ನ ಊರಲ್ಲಿ, ವಿದ್ಯಾರ್ಥಿ ಬಳಗದಲ್ಲಿ ಒಳ್ಳೆಯ ಶಿಕ್ಷಕನಾಗಿ ಗುರುತಿಸಿಕೊಂಡಿದ್ದೀನಿ. ಇಷ್ಟು ಬಿಟ್ಟರೆ, ವಿಶೇಷಗಳೇನೂ ಇಲ್ಲ.
ದನ್ಯವಾದಗಳು.